ಆರ್​ಸಿಬಿ-ಸಿಎಸ್​ಕೆ ಪಂದ್ಯ ನೋಡಲು ಬಂದ ಸಿಎಂ ಸಿದ್ದರಾಮಯ್ಯ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸದ್ಯ ಐಪಿಎಲ್​ ಮಹಾಸಮರ ನಡೆಯುತ್ತಿದೆ. ಪ್ಲೇಆಫ್​​ಗೆ ಕಾಲಿಡಲು, ಆರ್​ಸಿಬಿ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ರೋಚಕ ಪಂದ್ಯ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಆರ್​ಸಿಬಿ-ಸಿಎಸ್​ಕೆ ಪಂದ್ಯ ವಿಕ್ಷೀಸಿದ್ದು, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ H.C.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಕೆ.ವೆಂಕಟೇಶ್‌ ಸಾಥ್ ನೀಡಿದ್ದಾರೆ. ಇನ್ನು ನಟ ಶಿವರಾಜ್​ ಕುಮಾರ್​ ಕೂಡ ಪಂದ್ಯ ವೀಕ್ಷಣೆ ಮಾಡಿದ್ದಾರೆ.