ದಾವಣಗೆರೆ: ಆ ಹಣ್ಣು ಹಣ್ಣು ಮುದುಕಿ ತನ್ನ ಇಳಿವಯಸ್ಸಿನಲ್ಲಿ ತನ್ನ ಸರಕಾರಿ ಹಕ್ಕು ಚಲಾಯಿಸಲು ಅಂದರೆ ತನಗೆ ಸಲ್ಲಬೇಕಾದ ಅರ್ಹ ಮಾಸಾಶನ ಹಣ ಪಡೆಯಲು ಬರೋಬ್ಬರಿ 2 ಕಿಲೋ ಮೀಟರ್ ತೆವಳಿಕೊಂಡು ಬಂದಿದ್ದಾರೆ! ಎಂಬಲ್ಲಿಗೆ ಮಾನವೀಯತೆಯ ಮತ್ತೊಂದು ಮುಖ/ ಮಜಲು ಅನಾವರಣಗೊಂಡಿದೆ. ಹೌದು ಕಾಲಿಲ್ಲದ ಅಜ್ಜಿ ಗಿರಿಜಮ್ಮ ಅವರು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದ ನಿವಾಸಿ.