ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ವಿವಾಹ ಕಾರ್ಯ ಇಂದು (ಆಗಸ್ಟ್ 24) ನೆರೆವೇರುತ್ತಿದೆ. ವಿರಾಜಪೇಟೆಯ ಅಂಬತ್ತಿ ಕೊಡವ ಸಮಾಜದಲ್ಲಿ ಇವರ ವಿವಾಹ ಕಾರ್ಯಗಳು ಆರಂಭ ಆಗಿವೆ. ಕುಟುಂಬದವರು, ಆಪ್ತರು ಹಾಗೂ ಕೆಲವು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿ ಆಗುತ್ತಿದ್ದಾರೆ. ಈ ಮದುವೆ ಕೊಡವ ಶೈಲಿಯಲ್ಲಿ ನಡೆಯುತ್ತಿದೆ. ಹರ್ಷಿಕಾ ಹಾಗೂ ಭುವನ್ ಅವರ ಉಡುಗೆ ಗಮನ ಸೆಳೆಯುತ್ತಿದೆ. ಹರ್ಷಿಕಾ ಹಾಗೂ ಭುವನ್ ಹಲವು ವರ್ಷಗಳಿಂದ ಪ್ರಿತಿಸುತ್ತಿದ್ದರು. ಇವರಗೆ ಪ್ರೀತಿಗೆ ಹೊಸ ಅರ್ಥ ಸಿಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗೆ ಶುಭಾಶಯಗಳು ಬರುತ್ತಿವೆ.