ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಅವರ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಇನ್ನುಳಿದ ಸ್ಪರ್ಧಿಗಳು ಬೇಸತ್ತಿದ್ದಾರೆ. ‘ನನ್ನನ್ನು ಯಾರೂ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ’ ಎಂದು ಉಗ್ರಂ ಮಂಜು ಆದೇಶ ಮಾಡಿದ್ದಾರೆ. ಈ ವಾರ ಮಂಜು ಕ್ಯಾಪ್ಟನ್ ಆಗಿದ್ದಾರೆ. ಅಷ್ಟಕ್ಕೂ ಅವರು ಬೇರೆಯವರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಯಾಕೆ ಅಂತ ತಿಳಿಯಲು ಸೋಮವಾರದ (ನವೆಂಬರ್ 25) ಸಂಚಿಕೆ ನೋಡಬೇಕು.