‘ಟಾಪ್ 2ನಲ್ಲಿ ಇವರು ಇರ್ತಾರೆ ಅಂದುಕೊಂಡಿದ್ದೆ’; ಹೊರ ಬರೋ ಎರಡನೇ ಸ್ಪರ್ಧಿಯ ಹೆಸರು ಹೇಳಿದ ನಮ್ರತಾ

‘ಬಿಗ್ ಬಾಸ್ ಕನ್ನಡ ಸೀಸನ್ 10’ ಕೊನೆಯ ಹಂತ ತಲುಪಿದೆ. ಕಪ್ ಗೆಲ್ಲಲೇಬೇಕು ಎನ್ನುವ ಕನಸನ್ನು ಎಲ್ಲರೂ ಕಾಣುತ್ತಿದ್ದಾರೆ. ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್, ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಈ ಬಗ್ಗೆ ಕನಸು ಕಾಣುತ್ತಿದ್ದಾರೆ. ಈ ಮಧ್ಯೆ ನಮ್ರತಾ ಗೌಡ ಅವರು ದೊಡ್ಮನೆ ಒಳಗೆ ಹೋಗಿದ್ದಾರೆ. ಅಷ್ಟೇ ಅಲ್ಲ, ಒಬ್ಬರನ್ನು ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆತಂದಿದ್ದಾರೆ. ‘ಈ ಸ್ಪರ್ಧಿ ಟಾಪ್ 2ನಲ್ಲಿ ಇರ್ತಾರೆ ಎಂದುಕೊಂಡಿದ್ದೆ’ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ ನಮ್ರತಾ. ಮುಖ್ಯವಾದವರೇ ಔಟ್ ಆಗಿರಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಸಿನಿಮಾ ಒಟಿಟಿಯಲ್ಲಿ ಇಂದು (ಜನವರಿ 28) ಈ ಎಪಿಸೋಡ್ ಪ್ರಸಾರ ಕಾಣಲಿದೆ.