ಟಿವಿ9 ಸಿನಿಮಾ ವರದಿಗಾರರು ನೀಡಿರುವ ಮಾಹಿತಿ ಪ್ರಕಾರ ವಿಷ್ಣು ಪ್ರಿಯಾ ಸಿನಿಮಾ ಫೆಬ್ರುವರಿ 21 ರಂದು ಬೆಳ್ಳಿತೆರೆಯನ್ನು ಅಪ್ಪಳಿಸಲಿದೆ. ಯುವ ಜೋಡಿ ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಪ್ರಧಾನ ಭೂಮಿಕೆಯಲ್ಲಿರುವ ಈ ಸಿನಿಮಾ ಅಪ್ಪಟ ಲವ್ ಸ್ಟೋರಿ ಅಂತೆ. ಅಂದಹಾಗೆ ಪ್ರಿಯಾ ವಾರಿಯರ್ ಯಾರು ಅಂತ ಗೊತ್ತಾಯ್ತು ತಾನೇ? ಒರು ಅಡಾರ್ ಲವ್ ಚಿತ್ರದಲ್ಲಿ ಮಿಟಿ ಮಿಟಿ ಕಣ್ಣು ಮಿಟುಕಿಸಿದ ತುಂಟ ಸುಂದರಿ !