ಬಿಗ್ ಬಾಸ್ ನೀಡಿದ ಟಾಸ್ಕ್ನಲ್ಲಿ ಆದ ತೊಂದರೆಯಿಂದ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಹಾನಿ ಆಗಿದೆ. ಇದಕ್ಕೆ, ವಿನಯ್, ಮೈಕಲ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಸೇರಿ ಅನೇಕರು ಕಾರಣ. ಆದರೆ, ಈ ವಿಚಾರದಲ್ಲಿ ವಿನಯ್ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರಿಗೆ ಈ ಬಗ್ಗೆ ಮರುಕವೂ ಇಲ್ಲ. ಈ ವಿಚಾರದಲ್ಲಿ ಹೆಚ್ಚು ತಪ್ಪಿತಸ್ಥ ಭಾವನೆ ಕಾಡುತ್ತಿರುವುದು ವರ್ತೂರು ಸಂತೋಷ್ ಅವರಿಗೆ. ಕನ್ಫೆಷನ್ ರೂಂಗೆ ಕರೆದು ಒಬ್ಬೊಬ್ಬರನ್ನೇ ಕರೆದು ಮನದಾಳದ ಮಾತನ್ನು ಹೇಳಿಕೊಳ್ಳಲು ಅವಕಾಶ ನೀಡಿದ್ದರು. ‘ಕನ್ನಡಕ ಹಾಕಿಕೊಂಡು ಓಡಾಡೋದು ನೋಡಿದ್ರೆ ನನಗೆ ಬೇಸರ ಆಗುತ್ತದೆ. ಅದಕ್ಕೆ ಕಾರಣ ನಾನು ಎನಿಸುತ್ತದೆ’ ಎಂದಿದ್ದಾರೆ ವರ್ತೂರು ಸಂತೋಷ್.