ದೆಹಲಿಯ ಸುಂದರ್ ನರ್ಸರಿಯಲ್ಲಿ ಶುಕ್ರವಾರ ಜರುಗಿದ ‘ಜಹಾನ್-ಎ-ಖುಸ್ರೋ ’ ಸೂಫಿ ಸಂಗೀತ ಉತ್ಸವದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಜಹಾನ್ ಎ ಖುಸ್ರೋ ಕಾರ್ಯಕ್ರಮದಲ್ಲಿ ಭಾರತದ ಮಣ್ಣಿನ ಘಮವಿದೆ ಎಂದರು. ಪವಿತ್ರ ರಂಜಾನ್ ಮಾಸ ಆರಂಭವಾಗುತ್ತಿದೆ, ನಿಮಗೆಲ್ಲರಿಗೂ ಮತ್ತು ದೇಶವಾಸಿಗಳಿಗೂ ರಂಜಾನ್ ಹಬ್ಬದ ಶುಭಾಶಯಗಳು. ಜಹಾನ್-ಎ-ಖುಸ್ರೋ ಸರಣಿಯು 25 ವರ್ಷಗಳನ್ನು ಪೂರೈಸುತ್ತಿದೆ.