ಜಮೀನು ಪರಿಹಾರ-ಪೊಲೀಸ್ ಜೊತೆ ಕುಟುಂಬದ ವಾಗ್ವಾದ

ನಾವು ಸಾರ್ವಜನಿಕರು, ಪೊಲೀಸ್ ಮತ್ತು ಸರ್ಕಾರ ನಮಗೆ ರಕ್ಷಣೆ ನೀಡಬೇಕು, ಸರ್ಕಾರ ನಡೆಯೋದೇ ನಮ್ಮಿಂದ ಅಂತ ಮುದ್ದುಮಾರಯ್ಯ ಕುಟುಂಬದ ಸದಸ್ಯರು ಗೋಳಾಡುತ್ತಾರೆ. ಪೊಲೀಸರಾದರೂ ಏನು ಮಾಡಿಯಾರು? ತಮಗೆ ಮೇಲಿಂದ ಸಿಗುವ ಆದೇಶಗಳನ್ನು ಅವರು ಪಾಲಿಸುತ್ತಾರೆ. ಈ ಕುಟುಂಬ ಕ್ಲೇಮ್ ಮಾಡುತ್ತಿರೋದು ನಿಜವೇ ಆದಲ್ಲಿ ಅವರು ಅನುಭವಿಸುತ್ತಿರುವ ವೇದನೆ, ಅಸಹಾಯಕತೆ ಮತ್ತು ಹತಾಷೆ ಎಂಥದ್ದು ಅಂತ ಕಲ್ಪಿಸಿಕೊಳ್ಳಿ.