ಕೆಂಪೇಗೌಡ ವಿಮಾನ ನಿಲ್ಧಾಣದಲ್ಲಿ ಎಸ್ಐಟಿ ಅಧಿಕಾರಿಗಳು

ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ವಿಮಾನ ಕೆಐಎನಲ್ಲಿ ಲ್ಯಾಂಡ್ ಆದಮೇಲೆ ಪ್ರಜ್ವಲ್ ರೇವಣ್ಣ ಇಮ್ಮಿಗ್ರೇಷನ್ ವಿಭಾಗಕ್ಕೆ ಬರುತ್ತಾರೆ. ವಿಮಾನ ನಿಲ್ದಾಣದ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ಕೆಐಎ ಪೊಲೀಸರಿಗೆ ಒಪ್ಪಿಸುತ್ತಾರೆ. ಏರ್ಪೋರ್ಟ್ ಪೊಲೀಸರು ಸಂಸದನನ್ನು ಎಸ್ಐಟಿ ತಂಡಕ್ಕೆ ಒಪ್ಪಿಸಲಿದ್ದಾರೆ. ಅಲ್ಲಿಂದ ಅವರನ್ನು ನೇರವಾಗಿ ಎಸ್ಐಟಿ ಕಚೇರಿಗೆ ಕರೆತರಲಾಗುತ್ತದೆ ಮತ್ತು ಪ್ರಾಯಶಃ ನಾಳೆ ಬೆಳಗ್ಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು.