ಭಾವುಕರಾಗಿ ಎಸ್​ಎಂ ಕೃಷ್ಣ ಅಂತಿಮ ದರ್ಶನ ಪಡೆದ ನಟಿ ರಮ್ಯಾ

ಕೃಷ್ಣ ಅವರು ನಿಧನರಾದ ಬೆನ್ನಲ್ಲೆ ಅವರ ಹಲವು ರಂಗದ ಗಣ್ಯರು ಮುಂಜಾನೆಯೇ ಬಂದು ಅಂತಿಮ ದರ್ಶನ ಪಡೆದರು. ಮಂಡ್ಯ ಮಾಜಿ ಸಂಸದೆ, ನಟಿಯೂ ಆಗಿರುವ ರಮ್ಯಾ ಅವರು ಸಹ ಮುಂಜಾನೆಯೇ ಬಂದು ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಕೃಷ್ಣ ಅವರ ಮನೆಯ ಬಳಿ ಬಂದಾಗ ರಮ್ಯಾ ಬಹಳ ಭಾವುಕರಾಗಿದ್ದರು.