ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ

ಬಿಜೆಪಿಯಲ್ಲಿ ಆಫರ್, ಒಲಿದು ಬರುವ; ಮೊದಲಾದ ಪದಗಳೊಗೆ ಆಸ್ಪದವಿಲ್ಲ, ಮಾದಪ್ಪನ ಹುಡುಕಿಕೊಂಡು ಹೋದರೆ ಸಿಗಲ್ಲ, ಮಾದಪ್ಪ ನಮ್ಮ ಜೊತೆಯಲ್ಲೇ ಇರಬೇಕು, ಇವತ್ತು ನಾನು ಮಾದಪ್ಪನ ದರ್ಶನ ಮಾಡಿಕೊಂಡು ಸಂತೋಷವಾಗಿದ್ದೇನೆ, ಯಾವುದನ್ನೂ ಆಶಿಸದೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ, ನಿಮ್ಮ ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಲಿದೆ ಎಂದು ಸೋಮಣ್ಣ ಹೇಳಿದರು.