ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿ ಹೋರಾಟದ ಕಿಚ್ಚು ಜೋರಾಗಿದೆ. ಕನ್ನಡ ಚಿತ್ರರಂಗ ಕೂಡ ಈ ಹೋರಾಟದಲ್ಲಿ ಭಾಗಿ ಆಗಿದೆ. ಪ್ರಮುಖ ಕಲಾವಿದರು ರೈತರ ಬೆಂಬಲಕ್ಕೆ ನಿಂತಿದ್ದಾರೆ. ನಟ ಧ್ರುವ ಸರ್ಜಾ ಕೂಡ ಕಾವೇರಿ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಅವರು ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ. ‘ಕಾವೇರಿ ನಮ್ಮೆಲ್ಲರ ತಾಯಿ. ಅದು ಕರುನಾಡಿನ ಜೀವ ನದಿ. ಈ ಸಮಸ್ಯೆಯನ್ನು ಎಲ್ಲರೂ ಆದಷ್ಟು ಬೇಗ ಬಗೆಹರಿಸಬೇಕು ಅಂತ ಕೇಳಿಕೊಳ್ಳುತ್ತೇನೆ. ನಮ್ಮ ಹಿರಿಯ ನಟರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಒಬ್ಬ ರೈತನ ಮಗನಾಗಿ, ಕನ್ನಡಿಗರಾಗಿ ನಾವೆಲ್ಲರೂ ಈ ಹೋರಾಟದಲ್ಲಿ ಇರುತ್ತೇವೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.