ಸ್ಪಂದನಾ ಅಂತಿಮ ದರ್ಶನ ಪಡೆದ ಅಶ್ವಿನಿ; ವಿಧಿಯ ಶಪಿಸಿ ಗಳಗಳನೆ ಅತ್ತ ಪುನೀತ್ ಪತ್ನಿ

ಡಾ. ರಾಜ್ಕುಮಾರ್ ಕುಟುಂಬಕ್ಕೆ ಒಂದಾದಮೇಲೆ ಒಂದರಂತೆ ದುಃಖ ಎದುರಾಗುತ್ತಲೇ ಇದೆ. 2021ರ ಅಕ್ಟೋಬರ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ಮೃತಪಟ್ಟರು. ಇದಾದ ಕೆಲವೇ ತಿಂಗಳಲ್ಲಿ ಅಶ್ವಿನಿ ಅವರ ತಂದೆ ರೇವನಾಥ್ ನಿಧನ ಹೊಂದಿದರು. ರಾಜ್ ಕುಟುಂಬದ ಕುಡಿ ಸೂರಜ್ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಈಗ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ ಹೊಂದಿದ್ದಾರೆ. ಈ ನೋವನ್ನು ಅರಗಿಸಿಕೊಳ್ಳೋಕೆ ರಾಜ್ ಫ್ಯಾಮಿಲಿಗೆ ಸಾಧ್ಯವಾಗುತ್ತಿಲ್ಲ. ಸ್ಪಂದನಾ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್ಕುಮಾರ್ ಕಣ್ಣೀರು ಹಾಕಿದರು.