ಚೆನ್ನೈನ ಚೆಪಾಕ್ ಮೈದಾನ ಅಶ್ವಿನ್ ಅವರ ತವರು ಮೈದಾನವಾಗಿದೆ. ಹೀಗಾಗಿ ಈ ಪಂದ್ಯವನ್ನು ವೀಕ್ಷಿಸಲು ಅಶ್ವಿನ್ ಅವರ ಪತ್ನಿ ಮತ್ತು ಪುತ್ರಿಯರು ಸಹ ಕ್ರೀಡಾಂಗಣಕ್ಕೆ ಬಂದಿದ್ದರು. ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಅಶ್ವಿನ್ರನ್ನು ಭೇಟಿಯಾದ ಅವರ ಮಡದಿ ಹಾಗೂ ಮಕ್ಕಳು, ಅಶ್ವಿನ್ ಜೊತೆ ನಡೆಸಿದ ಮಾತುಕತೆಯ ವಿಡಿಯೋವನ್ನು ಇದೀಗ ಬಿಸಿಸಿಐ ಹಂಚಿಕೊಂಡಿದೆ.