ಇಂದು ಬೆಳಗ್ಗೆಯಿಂದ ಜಲಾಶಯದಿಂದ ನೀರನ್ನು ಖಾಲಿ ಮಾಡುವ ಕೆಲಸ ಆರಂಭವಾಗಿದೆ. ಟಿಬಿ ಡ್ಯಾಂನಲ್ಲಿ 103 ಟಿಎಂಸಿ ನೀರು ಸಂಗ್ರಹವಾಗಿತ್ತು ಮತ್ತು ಕ್ರೆಸ್ಟ್ ಗೇಟ್ ಗಳ ಮೂಲಕ ಸುಮಾರು 60 ಟಿಎಂಸಿ ನೀರನ್ನು ನದಿಗಳಿಗೆ ಹರಿಬಿಡಬೇಕಿದೆ. ಜಲಾಶಯದಲ್ಲಿ ಕನಿಷ್ಠ 50ಟಿಎಂಸಿ ನೀರನ್ನು ಉಳಿಸಿಕೊಳ್ಳುವಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತುಂಗಭದ್ರಾ ನಿಗಮಕ್ಕೆ ಸೂಚನೆ ನೀಡಿದ್ದಾರೆ.