ಜಲಾಶಯಕ್ಕೆ ನೀರು ಬರುತ್ತಿರೋದು ರೈತಾಪಿ ಸಮುದಾಯಕ್ಕೆ ಖುಷಿಯನ್ನುಂಟು ಮಾಡಿದ್ದರೆ, ಅದರೊಂದಿಗಿರುವ ಸಮಸ್ಯೆ ಅವರನ್ನು ಬಾಧಿಸುತ್ತಿದೆ. ವಿಷಯವೇನೆಂದರೆ ಕಳೆದ ವರ್ಷ ಬಿರುಕು ಕಂಡಿದ್ದ ಕ್ರಸ್ಟ್ ಗೇಟ್ ಇನ್ನೂ ರಿಪೇರಿಯಾಗದ ಕಾರಣ 130 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 80 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹಗೊಂಡರೆ ಅದು ಜಲಾಶಯದ ಎಲ್ಲ 33 ಗೇಟ್ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.