‘ಹನುಮಂತ ಮದುವೆಯಾದರೆ ನಿಮ್ಮ ಸೊಸೆ ಇದೇ ರೀತಿ ಬಟ್ಟೆ ಹಾಕಬೇಕಾ’ ಎಂದು ರಜತ್ ಅವರು ಪ್ರಶ್ನೆ ಮಾಡಿದ್ದಾರೆ. ‘ಹೌದು, ಅದಕ್ಕೆ ನಾನು ನಾಲ್ಕು ಜೊತೆ ಬಟ್ಟೆ ಹೊಲೆದಿದ್ದೇನೆ. ಅದು ರೂಢಿ ಆಗುತ್ತದೆ. ಇವತ್ತು ಭಾರ ಎನಿಸುತ್ತದೆ. ಆದರೆ ನಾಳೆ ಹಗುರ ಎನಿಸುತ್ತದೆ. ನಮ್ಮದು ಹೆಣ್ಣು ದೇವತೆ ಮನೆ. ಬೇರೆ ಬಟ್ಟೆ ನಡೆಯಲ್ಲ’ ಎಂದು ಹನುಮಂತನ ತಾಯಿ ಹೇಳಿದ್ದಾರೆ.