SM Krishna No More: ಎಸ್ ಎಂ ಕೃಷ್ಣ ಅವರ ಅಂತಿಮ ಸಂಸ್ಕಾರದ ಪೂರ್ತಿಗೊಂಡ ಬಳಿಕ ಅವರ ಪತ್ನಿ ಪ್ರೇಮ ಅವರು ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ನಡೆದು ಹೋಗುವ ದೃಶ್ಯ ಮನಕಲುಕುವಂತಿತ್ತು. ತಮ್ಮ ಅಗಾಧ ನೋವಿನಲ್ಲೂ ಅವರು ತಮ್ಮನ್ನು ವಂದಿಸಿದವರಿಗೆ ಪ್ರತಿವಂದನೆ ಹೇಳುತ್ತಿದ್ದರು. ಆದರೆ ಆ ಸ್ಥಳದಲ್ಲಿ ಕೆಲವರು ಪಾದಮುಟ್ಟಿ ನಮಸ್ಕರಿಸಿದ್ದು ಅವರಿಗೆ ಸರಿಯೆನಿಸಲಿಲ್ಲ.