ಮುರುಗನ್ ದೇವಸ್ಥಾನದ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ. ಇಬ್ಬರು ವ್ಯಕ್ತಿಗಳು ದೇವಸ್ಥಾನದ ಹೊರಗೆ ಬೈಕ್‌ನಲ್ಲಿ ಬರುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ದೇವಸ್ಥಾನದ ದ್ವಾರದಲ್ಲಿ ಬೈಕ್ ನಿಲ್ಲಿಸುತ್ತಾರೆ. ನಂತರ ಅವರಲ್ಲಿ ಒಬ್ಬರು ದೇವಸ್ಥಾನವನ್ನು ಪ್ರವೇಶಿಸುವುದನ್ನು ದೃಶ್ಯಾವಳಿಗಳು ತೋರಿಸುತ್ತವೆ. ಮತ್ತೊಂದು ವಿಡಿಯೋದಲ್ಲಿ ದೇವಾಲಯದ ಒಳಗೆ ಇಬ್ಬರು ವ್ಯಕ್ತಿಗಳು ದರೋಡೆ ಮಾಡುತ್ತಿರುವುದನ್ನು ತೋರಿಸುತ್ತದೆ.