ಖುಷಿ ಖುಷಿಯಿಂದ ಆ್ಯಂಕರ್ ಅನುಶ್ರೀಗೆ ಹಗ್ ಕೊಟ್ಟ ರಾಜ್ ಬಿ. ಶೆಟ್ಟಿ

ರಾಜ್ ಬಿ. ಶೆಟ್ಟಿ ಅವರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅವರು ಈಗ ‘ಟೋಬಿ’ ಸಿನಿಮಾ ಮೂಲಕ ಜನರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆದಿದೆ. ಇದಕ್ಕೆ ಆ್ಯಂಕರ್ ಅನುಶ್ರೀ ಕೂಡ ಆಗಮಿಸಿದ್ದರು. ರಾಜ್ ಬಿ ಶೆಟ್ಟಿ ಹಾಗೂ ಅನುಶ್ರೀ ನಡುವೆ ಒಳ್ಳೆಯ ಬಾಂಧವ್ಯ ಇದೆ. ರಾಜ್ ಬಿ. ಶೆಟ್ಟಿ ಅವರನ್ನು ಎದುರುಗೊಳ್ಳುತ್ತಿದ್ದಂತೆ ಅನುಶ್ರೀ ಅವರು ಒಂದು ಹಗ್ ಕೊಟ್ಟರು. ಆ ವಿಡಿಯೋ ಇಲ್ಲಿದೆ.