ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಸಂತ್ರಸ್ತೆ ನೀಡಿದ ದೂರಲ್ಲೇನಿದೆ?

ಪ್ರಜ್ವಲ್ ರೇವಣ್ಣ ಅವರ ಎಂಪಿ ಕ್ವಾರ್ಟರ್ಸ್​ಗೆ ಹೋದಾಗ ಮೇಲ್ಗಡೆಯ ರೂಮಿನಲ್ಲಿ ಕಾಯಲು ಹೇಳಿದರು. ಬಳಿಕ ಅಲ್ಲಿ ಬಂದು ಅವರು ನನ್ನ ಮೇಲೆ ಬಲಾತ್ಕಾರ ಮಾಡಿದರು. ವಿಡಿಯೋ ಚಿತ್ರೀಕರಣ ಕೂಡ ಮಾಡಿದರು. ಯಾರ ಬಳಿಯಾದರೂ ಬಾಯಿ ಬಿಟ್ಟರೆ ವಿಡಿಯೋ ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದರು. ಗಂಡನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಅತ್ಯಾಚಾರ ಸಂತ್ರಸ್ತೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.