ಸಿದ್ರಾಮಯ್ಯ ಪತ್ನಿ ಬಗ್ಗೆ ತುಂಬಾ ಗೌರವ ಇದೆ ಎಂದ ಸೋಮಣ್ಣ

ಬಳ್ಳಾರಿಯ ಪಾರ್ವತಿ ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ. ನಾವು ಯಾರೂ ಸಿದ್ದರಾಮಯ್ಯ ಪತ್ನಿ ಬಗ್ಗೆ ಮಾತನಾಡಿಲ್ಲ ಎಂದು ಸಿಎಂ ಬಗ್ಗೆ ಸಾಫ್ಟ್​ಕಾರ್ನರ್ ವ್ಯಕ್ತಪಡಿಸಿದ್ದಾರೆ.​