ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳದ ಗವಿಮಠ ಅಜ್ಜನ ಜಾತ್ರೆ: ಭಕ್ತರ ದಂಡು

ದಕ್ಷಿಣ ಕುಂಭಮೇಳ ಎಂದೇ ಸುಪ್ರಸಿದ್ದವಾಗಿರುವ ಕೊಪ್ಪಳದ ಗವಿಮಠದ ಅಜ್ಜನ ಜಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಭಕ್ತಿ, ಭಾವದಿಂದ ಎಳೆಯುವ ಭವ್ಯ ರಥೋತ್ಸವಕ್ಕೆ ಸುತ್ತೂರು ಮಠದ ಶ್ರೀಗಳು ಚಾಲನೆ ನೀಡಿದ್ದಾರೆ. ರಥೋತ್ಸವಕ್ಕೆ ಚಾಲನೆ ಕೊಟ್ಟ ಬಳಿಕ ಗವಿಮಠದ ಶ್ರೀಗಳು ಆರ್ಶಿವಚನ ನೀಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್​ ಕೂಡ ಜಾತ್ರೆಯಲ್ಲಿ ಭಾಗವಹಿಸಿದ್ದರು.