‘ಆಚಾರ್​ ಆ್ಯಂಡ್​ ಕೋ’ ಗೆದ್ದ ಬಳಿಕ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮುಂದೆ ಇದೆ ದೊಡ್ಡ ಸವಾಲು

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಅವರು ‘ಪಿಆರ್​ಕೆ ಪ್ರೊಡಕ್ಷನ್ಸ್​’ ಆರಂಭಿಸಿದ್ದರು. ಅದರ ಜವಾಬ್ದಾರಿಯನ್ನು ಈಗ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಹೊತ್ತುಕೊಂಡಿದ್ದಾರೆ. ಈ ಬ್ಯಾನರ್​ ಮೂಲಕ ನಿರ್ಮಾಣವಾದ ‘ಆಚಾರ್​ ಆ್ಯಂಡ್​ ಕೋ’ ಸಿನಿಮಾ ಗೆದ್ದಿದೆ. ಈಗ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ಮುಂದೆ ನಿಜವಾದ ಸವಾಲು ಇದೆ. ಏನದು? ಒಳ್ಳೆಯ ಕಥೆ ಮತ್ತು ನಿರ್ದೇಶಕರನ್ನು ಸೆಲೆಕ್ಟ್​ ಮಾಡುವುದು. ಅದೇ ದೊಡ್ಡ ಸವಾಲು. ಈ ಬಗ್ಗೆ ‘ಆಚಾರ್​ ಆ್ಯಂಡ್​ ಕೋ’ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ಅವರು ಮಾತನಾಡಿದ್ದಾರೆ. ಸದ್ಯ ‘ಪಿಆರ್​ಕೆ ಪ್ರೊಡಕ್ಷನ್ಸ್​’ ಮೂಲಕ ಮುಂಬರುವ ಸಿನಿಮಾಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.