ಮಗು ಹುಟ್ಟಿದಾಗಿನಿಂದ ಹಿಡಿದು ಬೆಳೆದು ದೊಡ್ಡವನಾಗಿ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವಂತೆ ಆಗುವವರೆಗೂ ಮಕ್ಕಳಿಗಾಗಿ ತಂದೆ ಇಡೀ ಜೀವನವನ್ನೇ ಸವೆಸುತ್ತಾನೆ. ಅಷ್ಟೇ ಅಲ್ಲದೆ ಮೊದಮೊದಲು ಕಡಿಮೆ ಸಂಬಳವಿದ್ದರೆ ಮಗನ ಖರ್ಚಿಗಾಗಿ ಹಣ ಹೊಂದಿಸುತ್ತಾರೆ. ಮದುವೆ ಮಾಡಿಸುತ್ತಾರೆ. ಆದರೆ ಕೆಲವು ಕ್ರೂರ ಮಕ್ಕಳು ತಾವು ಹತ್ತಿ ಬಂದ ಏಣಿಯನ್ನೇ ಒದ್ದು ಹೋಗಿಬಿಡುತ್ತಾರೆ. ಅಂಥದ್ದೇ ಘಟನೆ ಮುಂಬೈನಲ್ಲಿ ನಡೆದಿದೆ.