ಇಂದು (ಆಗಸ್ಟ್ 15) ನಟ, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಹುಟ್ಟುಹಬ್ಬ. ಪುನೀತ್ ಅಗಲಿದ ನೋವಿನಲ್ಲೇ ದಿನ ದೂಡುತ್ತಿರುವ ರಾಘವೇಂದ್ರ ರಾಜ್ಕುಮಾರ್ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಆದರೆ ಒಂದೊಮ್ಮೆ ಪುನೀತ್ ರಾಜ್ಕುಮಾರ್ ಬದುಕಿದ್ದಿದ್ದರೆ ಈ ದಿನ ಅವರು ಏನು ಮಾಡಿರುತ್ತಿದ್ದರು, ತಮಗೆ ಹೇಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದರು ಎಂದು ರಾಘವೇಂದ್ರ ರಾಜ್ಕುಮಾರ್ ವಿವರಿಸಿದ್ದಾರೆ.