ಈ ವಾರ ಬಿಗ್ ಬಾಸ್ ಮನೆಯಲ್ಲಿ ರೆಸಾರ್ಟ್ ಶೈಲಿಯ ಟಾಸ್ಕ್ ನೀಡಲಾಗಿದೆ. ಮೊದಲು ರಜತ್ ಅವರು ರೆಸಾರ್ಟ್ ಸಿಬ್ಬಂದಿಗಳ ತಂಡದಲ್ಲಿ ಇದ್ದರು. ಆದರೆ ಈಗ ಆಟ ಬದಲಾಗಿದೆ. ಅವರ ತಂಡಕ್ಕೆ ಈಗ ಅತಿಥಿಗಳ ಪಟ್ಟ ಸಿಕ್ಕಿದೆ. ಹಾಗಾಗಿ ರಜತ್ ಸಿಕ್ಕಾಪಟ್ಟೆ ಎಗರಾಟ ಶುರು ಮಾಡಿಕೊಂಡಿದ್ದಾರೆ. ಅವರ ಆರ್ಭಟ ನೋಡಿ ಇನ್ನುಳಿದವರಿಗೆ ತಲೆ ನೋವು ಶುರುವಾಗಿದೆ.