ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವುದು ನಿಮಗೆ ಗೊತ್ತಿದೆ, ಮತ್ತು ವಿಚಾರಣೆಗಾಗಿ ರಾಜ್ಯ ಸರ್ಕಾರ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವ ನಿರ್ಧಾರ ಸಹ ಮಾಡಿದೆ. ಪ್ರಕರಣವನ್ನು 120 ದಿನಗಳಲ್ಲಿ ಇತ್ಯರ್ಥಗೊಳಿಸುವೆಡೆ ಸರ್ಕಾರದ ಚಿಂತೆ ಇದೆ, ಸಿದ್ದರಾಮಯ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಹಂತಕನಿಗೆ ಗಲ್ಲು ಶಿಕ್ಷೆಯನ್ನು ಶಿಫಾರಸ್ಸು ಮಾಡಲಿವೆ ಎಂದು ರಂದೀಪ್ ದಂಪತಿಗೆ ಹೇಳಿದರು.