ಕೊಪ್ಪಳದಲ್ಲಿ ಪೋಲಾಗುತ್ತಿದೆ ಕುಡಿಯುವ ನೀರು

ಇದು ನಿಜಕ್ಕೂ ನಿರ್ಲಕ್ಷ್ಯತನದ ಪರಮಾವಧಿ. ಕಡು ಬೇಸಿಗೆಯಲ್ಲಿ ನೀರು ಹೀಗೆ ಪೋಲಾಗುತ್ತಿರೋದು ಕ್ರಿಮಿನಲ್ ಅಪರಾಧ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ನಗರಸಭೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪೈಪನ್ನು ದುರಸ್ತಿ ಮಾಡದಿರುವುದು ಅಚ್ಚರಿ ಮೂಡಿಸುತ್ತದೆ. ಅಥವಾ ಅವರ ಗಮನಕ್ಕೆ ಬಂದಿಲ್ಲ ಅಂತಾದರೆ ಸ್ಥಳೀಯರ ಪೈಕಿ ಯಾರಾದರೊಬ್ಬರು ಕಾರ್ಪೋರೇಶನ್​ಗೆ ಫೋನ್ ಮಾಡಿದರೂ ಆಗುತ್ತಿತ್ತು.