ಪ್ರಾಯಶಃ ಶಿವಕುಮಾರ್ ಅವರ ಈ ಧೋರಣೆಯೇ ಬಿಜೆಪಿ ನಾಯಕರಿಂದ ಪ್ರಶಂಸೆಗೊಳಗಾಗಿದೆ. ಸಿದ್ದರಾಮಯ್ಯ ವಿರುದ್ಧ ಅವರಿಗೆ ಎಷ್ಟೇ ಅಸಮಾಧಾನ, ಬೇಗುದಿ, ದುಗುಡು, ದುಮ್ಮಾನವಿದ್ದರೂ ಅದನ್ನು ಯಾವತ್ತೂ ಸಾರ್ವಜನಿಕವಾಗಿ ಹೊರಹಾಕುವುದಿಲ್ಲ. ಇದಕ್ಕೆ ತದ್ವಿರುದ್ಧವಾದ ಧೋರಣೆಯನ್ನು ವಿಜಯೇಂದ್ರ ಮತ್ತು ಬಸನಗೌಡ ಯತ್ನಾಳ್ ಪ್ರದರ್ಶಿಸುತ್ತಿದ್ದಾರೆ.