ಈ ಸರ್ಕಾರಕ್ಕೆ ಜನರ ಪ್ರಾಣಗಳ ಬಗ್ಗೆ ಕಾಳಜಿಯೇ ಇದ್ದಂತಿಲ್ಲ, ಕೇವಲ ತನ್ನ ಗ್ಯಾರಂಟಿಗಳ ಬಗ್ಗೆ ಹೇಳಿಕೊಂಡು ಸಾಗಿದೆ; ಅದರ ಗ್ಯಾರಂಟಿಗಳ ಭರದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಎಂದರು. ಸಿದ್ದರಾಮಯ್ಯನವರಿಗೆ ಭಯೋತ್ಪಾದಕ ಕೃತ್ಯಗಳನ್ನು ನಿಲ್ಲಿಸುವುದು ಸಾಧ್ಯವಾಗುತ್ತಿಲ್ಲ ಅಂತಾದರೆ ರಾಜೀನಾಮೆ ಸಲ್ಲಿಸಿ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ಬಿಜೆಪಿ ಶಾಸಕ ಹೇಳಿದರು.