ಉಕ್ಕಿ ಹರಿದ ಮಡಿಸಾಲು ಹೊಳೆ, ತಗ್ಗು ಪ್ರದೇಶಗಳು ಜಲಾವೃತ

ಸ್ಥಳೀಯ ಮಹಿಳೆಯೊಬ್ಬರು ನಮ್ಮ ವರದಿಗಾನೊಂದಿಗೆ ಮಾತಾಡಿದ್ದು, ಪ್ರತಿ ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಇಂಥ ಪರಿಸ್ಥಿತಿ ತಲೆದೋರುತ್ತಂತೆ. ಅದರೆ ಅಧಿಕಾರಿಗಳು ಕೂಡಲೇ ಜನರ ನೆರವಿಗೆ ಧಾವಿಸಿ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ. ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣ ಸಹ ಪರಿಶೀಲನೆಗೆ ಬರುತ್ತಾರೆ ನೆರವು ಒದಗಿಸುತ್ತಾರೆ ಅಂತ ಮಹಿಳೆ ಹೇಳುತ್ತಾರೆ.