ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಅವಾಂತರ

ನಗರದಲ್ಲಿರುವ ಮರಗಿಡಗಳ ಸಮೀಕ್ಷೆ ನಡೆಸುವುದು ಅತ್ಯಂತ ಅವಶ್ಯಕವೆನಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಮರಗಳು ಉರುಳುವುದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಸರ್ವೇ ಮಾಡಿಸುವಾಗ ಉರುಳಬಹುದಾದ ಮರಗಳು ಗಮನಕ್ಕೆ ಬಂದೇ ಬರುತ್ತವೆ, ಅಂಥ ಮರಗಳನ್ನು ಕಡಿಸಿಬಿಟ್ಟರೆ ಅವು ಉರುಳಿ ವಾಹನಗಳು ಜಖಂಗೊಳ್ಳೋದು, ಪ್ರಾಣಾಪಾಯ, ಗಂಭೀರ ಸ್ವರೂಪದ ಗಾಯ ಮೊದಲಾದವುಗಳನ್ನು ತಪ್ಪಿಸಿದಂತಾಗುತ್ತದೆ.