ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪಗೆ ರೇಣುಕಾಚಾರ್ಯ ಪ್ರಶಸ್ತಿ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ರಂಭಾಪುರಿ ಪೀಠದಿಂದ ಯಡಿಯೂರಪ್ಪಗೆ ರೇಣುಕಾಚಾರ್ಯ ಪ್ರಶಸ್ತಿ ಲಭಿಸಿದೆ. ವೀರಶೈವ ಲಿಂಗಾಯತರ ಪಂಚ ಪೀಠಗಳಲ್ಲಿ ಮೂಲ ಪೀಠವಾಗಿರುವ ಬಾಳೆಹೊನ್ನೂರುಮಠದಲ್ಲಿ ಇಂದು ಯಡಿಯೂರಪ್ಪನವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಸಿ.ಎಂ ಬೊಮ್ಮಾಯಿ. ಇದಕ್ಕಾಗಿ ಇಂದು ರಂಭಾಪುರಿ ಪೀಠಕ್ಕೆ ಸಿಎಂ ಬೊಮ್ಮಾಯಿ, ಬಿಎಸ್‌ವೈ, ಪ್ರಹ್ಲಾದ್ ಜೋಶಿ ಆಗಮಿಸುತ್ತಿದ್ದಾರೆ.