ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ್ದೇನು?

ಸುಪ್ರೀಂ ಕೋರ್ಟ್ ಗಾರ್ಡನ್​ನಿಂದ ಗುಲಾಬಿ ಹೂವುಗಳನ್ನು ಕದ್ದ ಮಹಿಳೆಗೆ ಈ ಬಗ್ಗೆ ಪ್ರಶ್ನಿಸಿದಾಗ ಆಕೆ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾಳೆ. ಪ್ರಭಾಕರ್ ಕುಮಾರ್ ಮಿಶ್ರಾ ಎಂಬುವವರು ಎಕ್ಸ್​ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಆ ಮಹಿಳೆಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. "ಸುಪ್ರೀಂ ಕೋರ್ಟ್‌ನಲ್ಲಿ ಹಲವು ಗಂಭೀರ ವಿಷಯಗಳು ಬಾಕಿ ಇವೆ. ಜನರು ಕೊಲೆ ಮಾಡುತ್ತಾರೆ, ದರೋಡೆ ಮಾಡುತ್ತಾರೆ, ಆದರೆ ಯಾರೂ ಮಾತನಾಡುವುದಿಲ್ಲ. ಈಗ ನಾನು ಕೆಲವು ಹೂವುಗಳನ್ನು ಕೊಯ್ದಿದ್ದಕ್ಕೆ ಎಲ್ಲರೂ ಗಲಾಟೆ ಮಾಡುತ್ತಾರೆ" ಎಂದು ಆಕೆ ಹೇಳಿದ್ದಾಳೆ.