ಚಿಕ್ಕೋಡಿ: ತಲವಾರ್‌ನಿಂದ ಬೆರಳು ಕೋಯ್ದು ದುರ್ಗಾದೇವಿಗೆ ರಕ್ತದ ತಿಲಕವಿಟ್ಟ ಶ್ರೀರಾಮಸೇನೆ ಕಾರ್ಯಕರ್ತ

ಚಿಕ್ಕೋಡಿ, ಅ.22: ನವರಾತ್ರಿ ಉತ್ಸವದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರೊಬ್ಬರು ತನ್ನ ಬೆರಳನ್ನು ತಲವಾರ್‌ನಿಂದ ಕೊಯ್ದುಕೊಂಡು ದುರ್ಗಾದೇವಿ ಮೂರ್ತಿಗೆ ತಿಲಕವಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.