ಶಿವಮೊಗ್ಗ, ಆಗಸ್ಟ್ 17: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಎಂಟೂವರೆ ವರ್ಷದ ಆಜಾನ್ ಖಾನ್ನ ಪೊಲೀಸ್ ಅಧಿಕಾರಿಯಾಗುವ ಕನಸನ್ನು ಮಾನವೀಯ ನೆಲೆಗಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ಈಡೇರಿಸಿದ್ದಾರೆ. ಒಂದು ಗಂಟೆ ಮಟ್ಟಿಗೆ ಆಜಾನ್ನನ್ನು ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಮಾಡಲಾಯಿತು. ಈ ವೇಳೆ ಕಳ್ಳನೊಬ್ಬನಿಗೆ ಬುದ್ಧಿವಾದವೂ ಹೇಳಿ ಗಮನ ಸೆಳೆದಿದ್ದಾನೆ.