ಆರ್​ಜೆಡಿ, ಕಾಂಗ್ರೆಸ್​ ಸೃಷ್ಟಿಸಿದ್ದ ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ

ಬಿಹಾರದಲ್ಲಿ ಕಾಂಗ್ರೆಸ್​ ಹಾಗೂ ಆರ್​ಜೆಡಿ ಸೃಷ್ಟಿಸಿದ್ದ ಜಂಗಲ್​​ರಾಜ್​ಗೆ ಜನತೆ ಅಂತ್ಯ ಹಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಹಾರದ ಸಿವಾನ್​ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್​ ಹಾಗೂ ಆರ್​ಜೆಡಿ ರಾಜ್ಯವನ್ನು ಕಾನೂನುಬಾಹಿರತೆ, ಬಡತನ ಹಾಗೂ ಸಾಮೂಹಿಕ ವಲಸೆಯಿಂದ ಕೂಡಿದ ಜಂಗಲ್​​ರಾಜ್​ಗೆ ತಳ್ಳಿತ್ತು. ಆ ಕರಾಳ ಅಧ್ಯಾಯವನ್ನು ಕೊನೆಗೊಳಿಸಿದ್ದಕ್ಕಾಗಿ ಬಿಹಾರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.