ಪ್ರತಿಷ್ಠೆ ಆದ ಬಳಿಕ ಮೂರ್ತಿಗೆ ಶಕ್ತಿ ತುಂಬುವ ಕಾರ್ಯ ನಡೆಯುತ್ತಿದೆ. ಈ ಪ್ರಕಾರವಾಗಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ, ಮಧ್ವ ಸಂಪ್ರದಾಯಗಳ ತಂತ್ರಸಾರಗಳ ಮೂಲಕವೇ 48 ದಿನಗಳ ಮಂಡಲೋತ್ಸವ ಸೇವೆ ನಡೆಯುತ್ತಿದೆ. ಇದು ಜ. 23 ರಿಂದ ಆರಂಭವಾಗಿದ್ದು ಮಾ. 10ರ ವರೆಗೆ ನಡೆಯುತ್ತದೆ. ಬೇರೆ ಬೇರೆ ಊರುಗಳಿಂದ ಬಂದಂತಹ ವಿದ್ವಾಂಸರ ಮುಂದಾಳತ್ವದಲ್ಲಿ ಕೂಷ್ಮಾಂಡ ಹೋಮ, ರಾಮತಾರಕ ಹೋಮ, ಪವಮಾನ ಹೋಮ ಇತ್ಯಾದಿ ಹೋಮಗಳು ಪ್ರತಿನಿತ್ಯವೂ ನಡೆಯುತ್ತಿದ್ದು ಆ ಮೂಲಕ ರಾಮಲಲ್ಲಾನಿಗೆ ಮೂಲಮಂತ್ರಗಳ ಪಠಣೆ ಮೂಲಕ ಕಲಶಾಭಿಷೇಕವಾಗುತ್ತಿದೆ.