ಹಾಸನ: ಗ್ರಾಮದೆಲ್ಲೆಡೆ ಕಾಡಾನೆ ಭೀಮನ ಓಡಾಟ, ಜನರಲ್ಲಿ ಆತಂಕ
ಆಲೂರು ತಾಲೂಕಿನ ಅಬ್ಬನ ಗ್ರಾಮದೊಳಗೆ ಕಾಡಾನೆ ಭೀಮ ಪ್ರತ್ಯಕ್ಷನಾಗಿದ್ದಾನೆ. ಹಾಡ ಹಗಲೇ ಗ್ರಾಮದ ಬೀದಿಗಳಲ್ಲಿ ಜನರೆದುರು ರಾಜಗಾಂಭೀರ್ಯ ನಡಿಗೆಯಲ್ಲಿ ಕಾಡಾನೆ ಭೀಮ ಸಾಗಿದ್ದಾನೆ. ಊರಿನ ಒಳಗೆ ಕಾಡಾನೆ ಭೀಮ ಹೆಚ್ಚಾಗಿ ಓಡಾಡುತ್ತಿದ್ದಾನೆ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.