ಸದನದಲ್ಲಿ ನಡೆಯುವ ಎಲ್ಲ ಘಟನಾವಳಿಗಳು ಸಂವಿಧಾನದ ಪ್ರಕಾರ ಪರಿಷತ್ ನಲ್ಲಿ ಸಭಾಪತಿ ಮತ್ತು ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಗಮನಕ್ಕೆ ಬರುತ್ತವೆ ಮತ್ತು ಅವರೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಅದರೆ ಕಾಂಗ್ರೆಸ್, ಸದನದಲ್ಲಿ ನಡೆದ ವಿದ್ಯಮಾನಗಳನ್ನು ಸಭಾಪತಿಗಳಿಂದ ವಿಚಾರಣೆ ಮಾಡಿಸುವ ಬದಲು ಪೊಲೀಸ್ಗೆ ದೂರು ನೀಡುವ ಮೂಲಕ ಕಾಂಗ್ರೆಸ್ ಸಂವಿಧಾನದ ಆಶಯಗಳಿಗೆ ಅಪಚಾರ ಮಾಡುತ್ತಿದೆ ಎಂದು ರವಿ ಹೇಳಿದರು.