ಗದಗ, ಆಗಸ್ಟ್ 6: ಜಿಲ್ಲೆಯ ನರಗುಂದ ಪಟ್ಟಣದ ಆಶ್ರಯ ಕಾಲೋನಿಯಲ್ಲಿರುವ ಮನೆಯೊಂದರ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟ್ ಅಡಿಯಲ್ಲಿ ಬೃಹತ್ ಗಾತ್ರದ ಹಾವು ಪ್ರತ್ಯಕ್ಷವಾಗಿದೆ. ನವಾಬ್ ಪಠಾಣ್ ಎನ್ನುವವರ ಮನೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟ್ ಒಳಗೆ ಹೋದ ಹಾವು ಅವಿತುಕೊಂಡಿತ್ತು. ಮಕ್ಕಳು ವಾಹನದಲ್ಲಿ ಆಡುತ್ತಿದ್ದಾಗ ಹಾವು ನೋಡಿ ಭೀತಿಗೊಂಡಿದ್ದಾರೆ. ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಸುರೇಬಾನ, ಪರಿಶೀಲಿಸಿದಾಗ ಕೇರೆ ಹಾವು ಎಂದು ತಿಳಿಸಿದ್ದಾರೆ. ನಂತರ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.