ಪ್ರಜ್ವಲ್ ರೇವಣ್ಣ ರಾಸಲೀಲೆಗಳು ನಡೆದಿದ್ದೆಲ್ಲಿ?

ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ ಜೆಡಿಎಸ್​​ನ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಸದ್ಯ ಕಳೆದೊಂದು ವಾರದಿಂದ ಅಲ್ಲೋಲ ಕಲ್ಲೋಲ ಶುರುವಾಗಿದೆ. ಪ್ರಜ್ವಲ್ ರೇವಣ್ಣರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಎಲ್ಲೆಡೆ ಸಾಕಷ್ಟು ವೈರಲ್​ ಆಗಿದೆ. ಎಸ್​​ಐಟಿ ತನಿಖೆಗೆ ಆರಂಭಿಸಿದ್ದು, ಪೆನ್ ಡ್ರೈವ್​ನಲ್ಲಿರುವ ಸಾವಿರಾರು ವಿಡಿಯೋಗಳು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಆಗಿದೆ. ​