ಜಗಳೂರು ಪಟ್ಟಣದಲ್ಲಿ ಕಸಗುಡಿಸುವೆ ಎಂದ ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ, ಇಂದಿರಾ ಕ್ಯಾಂಟೀನ್​​ನಲ್ಲಿ ಊಟ ಮಾಡಿದರು

ಭಾನುವಾರ ಬಂದ್ರೆ ಸಾಕು ಅಲ್ಲೊಬ್ಬ ಶಾಸಕ ಪೊರಕೆ (Broom) ಹಿಡಿದುಕೊಂಡು ಬೀದಿ ಬೀದಿ ಸುತ್ತಾಡುತ್ತಾರೆ. ಈಗ ಅವರ ಹಿಂದೆ ಅಧಿಕಾರಿಗಳು ಸಹ ಬರುತ್ತಿದ್ದಾರೆ. ನಿನ್ನೆ ಭಾನುವಾರ ಬೆಳಿಗ್ಗೆಯಿಂದ (ಜುಲೈ 9) ಜಗಳೂರು ಪಟ್ಟಣದ ಬಹುತೇಕ ಕಡೆ ಹೀಗೆ ಕಸಗುಡಿಸಿದ ಶಾಸಕ‌ರು ಬಿ. ದೇವೇಂದ್ರಪ್ಪ ಅಂತಾ. ಇವರು ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕರು (Jagalur Congress MLA). ತಾಲೂಕಾ ಮಟ್ಟದ ಅಧಿಕಾರಿಗಳನ್ನು ಜೊತೆಗೆ ಕರೆದುಕೊಂಡು ಜಗಳೂರು ಪಟ್ಟಣದ ಬಹುತೇಕ ಕಡೆ ಕಸಗುಡಿಸಿದರು. ಹೀಗೆ ಕಸಗುಡಿಸಿದ ಬಳಿಕ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿದ ಶಾಸಕ ದೇವೇಂದ್ರಪ್ಪ (B Devendrappa) ಅವರು ಪ್ರತಿ ಭಾನುವಾರ ಇಡೀ ದಿನ ಪಟ್ಟಣದ ಸ್ವಚ್ಛತೆಗೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ವಿನಮ್ರವಾಗಿ ಹೇಳಿದರು.