ಸೆಕ್ಯೂರಿಟಿಗೆ ಸಂಬಂಧಿಸಿದಂತೆ ಗೃಹ ಇಲಾಖೆಯು ಬ್ಯಾಂಕ್ ಗಳಿಗೆ ಸೂಚನೆಗಳನ್ನು ರವಾನಿಸುತ್ತಿರುತ್ತದೆ, ದುರದೃಷ್ಟಕರ ಸಂಗತಿಯೆಂದರೆ ಎಟಿಎಂಗಳಿಗೆ ಕ್ಯಾಶ್ ತುಂಬುವ ಏಜೆನ್ಸಿ ಮತ್ತು ಮಂಗಳೂರು ಬ್ಯಾಂಕ್ನವರು ಸಶಸ್ತ್ರಧಾರಿ ಗಾರ್ಡ್ಗಳನ್ನು ನೇಮಕ ಮಾಡಿಕೊಂಡಿಲ್ಲ, ದರೋಡೆಕೋರರು ಮತ್ತು ಕಳ್ಳರು ಇಂಥ ಅವಕಾಶಗಳಿಗಾಗಿ ಕಾಯುತ್ತಿರುತ್ತಾರೆ ಎಂದು ಗೃಹ ಸಚಿವ ಹೇಳಿದರು.