ಪ್ರಧಾನಿ ಮೋದಿಗೆ ಅವರಿಷ್ಟದ ಮಖಾನದಿಂದ ಮಾಡಿದ ಹಾರ ಹಾಕಿ ಸನ್ಮಾನ

ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದ ಭಾಗಲ್ಪುರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಖಾನಾ ಒಂದು ಸೂಪರ್‌ಫುಡ್ ಮತ್ತು ದೇಶಾದ್ಯಂತ ಜನರಿಗೆ ಉಪಾಹಾರದ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.ದೇಶಾದ್ಯಂತ ಜನರಿಗೆ ಉಪಾಹಾರದ ಪ್ರಮುಖ ಭಾಗವೆಂದರೆ ಮಖಾನಾ ಎಂದು ಹೇಳಿದರು. ಭಾಷಣಕ್ಕೂ ಮುನ್ನ ಪ್ರಧಾನಿಯವರಿಗೆ ಮಖಾನದಿಂದ ಮಾಡಿದ ಹಾರವನ್ನು ಹಾಕಿ ಸನ್ಮಾನಿಸಲಾಯಿತು. "ಇಂದು ದೇಶದ ನಗರಗಳಲ್ಲಿ ಮಖಾನಾ ಉಪಾಹಾರದ ಪ್ರಮುಖ ಭಾಗವಾಗಿದೆ. 365 ದಿನಗಳಲ್ಲಿ ನಾನು 300 ದಿನಗಳು ಮಖಾನಾವನ್ನು ತಿನ್ನುತ್ತೇನೆ. ಇದು ಸೂಪರ್‌ಫುಡ್" ಎಂದು ಅವರು ರ್ಯಾಲಿಯಲ್ಲಿ ಹೇಳಿದರು.