ವಿ ಶ್ರೀನಿವಾಸ್ ಪ್ರಸಾದ್ ಮತ್ತು ಅಳಿಯ ಡಾ ಎಸ್ ಎನ್ ಮೋಹನ್

ರಾಜಕೀಯದಲ್ಲಿ ವಂಶಪಾರ್ಯಂಪರವನ್ನು ತೀವ್ರವಾಗಿ ವಿರೋಧಿಸುವ ಬಿಜೆಪಿ ಕರ್ನಾಟಕ್ಕದಲ್ಲಿ ಅದಕ್ಕೆ ಕುಮ್ಮಕ್ಕು ನೀಡುತ್ತಿರುವಂತೆ ಭಾಸವಾಗುತ್ತದೆ. ದಶಕಗಳಿಂದ ರಾಜಕಾರಣದಲ್ಲಿರುವ 76-ವರ್ಷ ವಯಸ್ಸಿನ ವಿ ಶ್ರೀನಿವಾಸ್ ಪ್ರಸಾದ್ ತಮ್ಮ ಸ್ಥಾನಕ್ಕೆ ಅಳಿಯನನ್ನು ತರಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ನೂರಾರು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದರೂ ಅವರನ್ನು ತಮ್ಮ ಸ್ಥಾನಕ್ಕೆ ಪರಿಗಣಿಸುವ ಉದಾರತೆ ಪ್ರಜ್ಞಾವಂತ ಮತ್ತು ಪ್ರಬುದ್ಧ ರಾಜಕಾರಣಿ ಪ್ರಸಾದ್ ಅವರಲ್ಲಿದಿರುವುದು ದುರಂತ.