ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುವವರಲ್ಲಿ ನಾನೂ ಒಬ್ಬ

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುವವರಲ್ಲಿ ನಾನೂ ಒಬ್ಬ. ಹಿಂದೆ ಮುಂದೆ ಮಾತನಾಡಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ನಾನು ಬದ್ಧ. ಡಿಕೆಶಿ ಪಕ್ಷ ಸಂಘಟನೆಗೆ ಹ್ಯಾಟ್ಸಾಫ್. ಸಿದ್ದರಾಮಯ್ಯಗೆ ಇಮೇಜ್ ಇದೆ, ಜನರ ಆಕರ್ಷಣೆ ಇದೆ. ಪಕ್ಷ ಯಾರನ್ನೇ ಸಿಎಂ ಮಾಡಿದರೂ ನಾವು ಒಪ್ಪಿಕೊಳ್ಳುತ್ತೇವೆ. ಲಿಂಗಾಯತ ನಾಯಕರಲ್ಲಿ ನಾನು ಅತಿ ಹೆಚ್ಚು ಬಾರಿ ಗೆದ್ದವನು. ಲಿಂಗಾಯತ ನಾಯಕರು ಸಿಎಂ ಆಗಲಿ ಅಂತಾ ಕೇಳೋದು ತಪ್ಪಿಲ್ಲ. 50:50 ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಒಬ್ಬರೇ 5 ವರ್ಷ ಸಿಎಂ ಆದ್ರೆ ಉತ್ತಮ ಆಡಳಿತ ನೀಡಲು ಸಾಧ್ಯ ಎಂದಿದ್ದಾರೆ.