Video: ಶಸ್ತ್ರಚಿಕಿತ್ಸೆ ವೇಳೆ ಪಿಯಾನೋ ಮೂಲಕ ಹನುಮಾನ್ ಚಾಲೀಸಾ ನುಡಿಸಿದ ಯುವಕ

ಯುವಕನೊಬ್ಬನಿಗೆ ಮೆದುಳಿನಲ್ಲಿ ಗೆಡ್ಡೆಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ, ಇದೀಗ ಆತನಿಗೆ AIIMS ಆಸ್ಪತ್ರೆಯ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಭೋಪಾಲ್‌ನ AIIMS ಆಸ್ಪತ್ರೆಯ ವೈದ್ಯರು 28 ವರ್ಷದ ಯುವಕನಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಶಸ್ತ್ರಚಿಕಿತ್ಸೆ ತುಂಬಾ ವಿಚಿತ್ರವಾಗಿತ್ತು, ಶಸ್ತ್ರಚಿಕಿತ್ಸೆ ಮಾಡುತ್ತಿರವಾಗಲೇ ಪಿಯಾನೋ ಮೂಲಕ ಹನುಮಾನ್ ಚಾಲೀಸಾ​​ನ್ನು ಯುವಕ ನುಡಿಸಿದ್ದಾನೆ.